ಹಂತ 3 : ತರಗತಿ 6 ರಿಂದ 8
ವಿಷಯ : ಚಂದ್ರಗ್ರಹಣ ಮತ್ತು ಸೂರ್ಯಗ್ರಹಣ
ಉದ್ದೇಶ : ಮಕ್ಕಳಿಗೆ ಚಂದ್ರಗ್ರಹಣ ಮತ್ತು ಸೂರ್ಯಗ್ರಹಣದ ಬಗ್ಗೆ ಅರಿವು ಮೂಡಿಸುವುದು.
ಬೇಕಾಗುವ ಸಾಮಾಗ್ರಿಗಳು :
- ಸುಮಾರು 10-12ಸೆ.ಮೀ ವ್ಯಾಸದ ಒಂದು ಚೆಂಡು/ಗ್ಲೋಬ್
- ಸುಮಾರು 2ಸೆ.ಮೀ ವ್ಯಾಸದ ಮತ್ತೊಂದು ಸಣ್ಣ ಚೆಂಡು.
- ಸುಮಾರು 10ಸೆ.ಮೀ ಉದ್ದ ದಪ್ಪ ತಂತಿ
- ಬೈಂಡಿಂಗ್ ವೈರ್
- ಮರದ ಹಲಗೆ
- ಬಲ್ಬ್/ಮೇಣದ ಬತ್ತಿ
- ಬೆಂಕಿ ಪೆಟ್ಟಿಗೆ
ಚಟುವಟಿಕೆ ಮಾಡುವ ವಿಧಾನ : ಮೇಲೆ ತಿಳಿಸಿದ ಸಾಮಾಗ್ರಿಗಳನ್ನು ಉಪಯೋಗಿಸಿ ಚಿತ್ರದಲ್ಲಿ ತೋರಿಸಿರುವಂತೆ ಉಪಕರಣಗಳನ್ನು
ಸಿದ್ಧಪಡಿಸಿ. ಈ ಉಪಕರಣದಲ್ಲಿ ಗ್ಲೋಬ್/ದೊಡ್ಡ ಚೆಂಡನ್ನು ಭೂಮಿಯೆಂದೂ,ಸಣ್ಣ ಚೆಂಡನ್ನು
ಚಂದ್ರನೆಂದೂ, ಉರಿಯುತ್ತಿರುವ ಬಲ್ಬ್/ಮೇಣದ ಬತ್ತಿಯನ್ನು ಸೂರ್ಯನೆಂದು ಭಾವಿಸೋಣ.
ಚಿತ್ರದಲ್ಲಿ
ತೋರಿಸಿರುವಂತೆ,ಚಂದ್ರನನ್ನು ಭೂಮಿ ಹಾಗೂ ಸೂರ್ಯರ ನಡುವೆ ತನ್ನಿ, ಏನಾಯಿತೆಂಬುದನ್ನು ಗಮನಿಸಿ.
ಚಟುವಟಿಕೆಗಳನ್ನು ಪುನರಾವರ್ತಿಸಿ ಸೂಕ್ಷ್ಮವಾಗಿ ಗಮನಿಸಿ.
ಚಿತ್ರದಲ್ಲಿ
ತೋರಿಸಿರುವಂತೆ ಭೂಮಿಯನ್ನು ಚಂದ್ರ ಮತ್ತು ಸೂರ್ಯರ ನಡುವೆ ಬರುವಂತೆ ಉಪಕರಣವನ್ನು ಅಣಿಗೊಳಿಸಿ
ಈಗಲೂ ಏನಾಯಿತೆಂಬುದ್ದನ್ನು ಗಮನಿಸಿ. ಚಟುವಟಿಕೆಗಳನ್ನು ಪುನರಾವರ್ತಿಸಿ ಸೂಕ್ಷ್ಮವಾಗಿ ಗಮನಿಸಿ.
ವೀಕ್ಷಣೆ : ಭೂಮಿ
ಹಾಗೂ ಸೂರ್ಯರ ನಡುವೆ ಚಂದ್ರ ಬಂದಾಗ,ಚಂದ್ರನ ನೆರಳು ಭೂಮಿಯ ಮೇಲೆ ಬೀಳುತ್ತದೆ.ಅದೇ
ಸೂರ್ಯ-ಚಂದ್ರರ ನಡುವೆ ಭೂಮಿ ಬಂದಾಗ ಭೂಮಿಯ ನೆರಳು ಭೂಮಿಯ ನೆರಳು ಚಂದ್ರನ ಮೇಲೆ ಬಿದ್ದು,ಪೂರ್ಣ
ಛಾಯೆಯಲ್ಲಿಡಗಿದ ಚಂದ್ರ ಕಾಣದಂತಾಗುತ್ತದೆ.


No comments:
Post a Comment