Tuesday, 12 September 2017

ನನ್ನ ಕುಟುಂಬದ ಇತಿಹಾಸ

ತರಗತಿ : 6 ರಿಂದ 8
ವಿಷಯ : ಕುಟುಂಬದ ಇತಿಹಾಸ ಶೋಧನೆ.
ಉದ್ದೇಶ : ಕುಟುಂಬದ ಹಿನ್ನಲೆಯ ಮೂಲಕ ಇತಿಹಾಸದ ಬಗ್ಗೆ ಅರ್ಥ ಮಾಡಿಸುವುದು.
ಸಾಮಾನ್ಯ ಸೂಚನೆಗಳುಕುಟುಂಬದ ಅರ್ಥ ಮತ್ತು ಕುಟುಂಬದ ಸದಸ್ಯರೊಂದಿಗಿನ ತನ್ನ ಸಂಬಂಧದ ಅರಿವು ಮಗುವಿಗೆ ಇರಬೇಕು.

I. ಸೂಚನೆಗಳು

1. ಕುಟುಂಬ ಇತಿಹಾಸ ರಚಿಸಲು ಸಾಮಾನ್ಯ ಅಂಶಗಳನ್ನು ಪಟ್ಟಿ ಮಾಡಿಕೊಳ್ಳಿ. ಕೆಳಗೆ ಕೆಲ ಸಾಮಾನ್ಯ ಅಂಶಗಳನ್ನು ನೀಡಲಾಗಿದೆ.
     (ಅ) ಕುಟುಂಬದ ಮನೆತನದ ಹೆಸರು
           ಉದಾ:- ಕಮತಗಿ, ಮಡಿವಾಳ, ಬಣಕಾರ, ಜೋಡಿದಾರ, ಪಟೇಲರ, ದೊಡ್ಡಮನೆ, ಬಾವಿಕಟ್ಟೆ,  ಇತ್ಯಾದಿ.
     (ಆ) ಕುಟುಂಬ ಸದಸ್ಯರುಗಳ ಹೆಸರು (ಲಭ್ಯವಿರುವಷ್ಟು)
     (ಇ) ಕುಟುಂಬದ ಮೂಲವೃತ್ತಿ
     (ಈ) ಸ್ವ-ಗ್ರಾಮ/ನಗರದ ಪರಿಚಯ
     (ಉ) ಕುಲದೇವರು, ಇದ್ದಲ್ಲಿ   
     (ಊ) ಕುಟುಂಬದಲ್ಲಿ ಆಚರಿಸುವ ವಿಶೇಷ ಧಾರ್ಮಿಕ ಆಚರಣೆಗಳ ಮಾಹಿತಿ
     (ಋ) ಕುಟುಂಬದಿಂದ ಬೇರ್ಪಟ್ಟು ಬೇರೆಡೆ ನೆಲಿಸಿದವರ ಬಗೆಗಿನ ಮಾಹಿತಿ.
     (ಎ) ಇದುವರೆಗಿನ ಸದಸ್ಯರಲ್ಲಿ ಆಸಕ್ತಿದಾಯಕ ವ್ಯಕ್ತಿಗಳ ಪರಿಚಯ.
     (ಏ) ಕಾಲನಂತರದಲ್ಲಿ ಕುಟುಂಬ ಸದಸ್ಯರುಗಳು ವಾಸವಿದ್ದ ಮನೆಯ ರಚನಾಶೈಲಿಯಲ್ಲಿ ಆಗಿರುವ ಬದಲಾವಣೆ.
     (ಐ) ಮನೆಯಲ್ಲಿ ಇರುವಂತ ಹಳೆಯ ವಸ್ತುಗಳ ಮಾಹಿತಿ. 
 2. ಮಕ್ಕಳು ಈ  ಮೇಲಿನ ಸಾಮಾನ್ಯ ಅಂಶಗಳಿಗೆ, ಅವರ ಕುಟುಂಬ ಸದಸ್ಯರು, ಸಂಬಂಧಿಗಳು ಮತ್ತು ನೆರೆ-ಹೊರೆಯವರನ್ನು ಸಂದರ್ಶಿಸಿ ಹಾಗೂ ಲಭ್ಯವಿರುವ ದಾಖಲೆಗಳಿಂದ (ವಂಶ ವೃಕ್ಷ, ಸರ್ಕಾರಿ ದಾಖಲೆಗಳು) ಮಾಹಿತಿ ಸಂಗ್ರಹಿಸಿ ದಾಖಲಿಸುವಂತೆ ತಿಳಿಸಿ.
3. ಮಕ್ಕಳು ಸಂಗ್ರಹಿಸಿದ ಮಾಹಿತಿಯನ್ನು ವ್ಯವಸ್ಥಿತವಾಗಿ ದಾಖಲಿಸುವ ವಿಧಾನದ ತಿಳಿಸಿಕೊಡಿ.
4. ಹೀಗೆ ದಾಖಲಿಸಿದ ಮಾಹಿತಿಯಿಂದ ಯಾವ ರೀತಿಯ ಪ್ರಯೋಜನವಿರಬಹುದು ಎನ್ನುವುದರ ಕುರಿತಾಗಿ ಚರ್ಚೆ ನಡೆಸಿ.        (ಮಾತನಾಡಲು ಬಾರದ ಮಕ್ಕಳು ಸಜ್ಞೆ ಮಾಡುವ ಮೂಲಕ/ಲಿಖಿತ ರೂಪದಲ್ಲಿ ವ್ಯಕ್ತ ಪಡಿಸಲಿ)
5. ನಂತರ ಮಕ್ಕಳು ದಾಖಲಿಸಿದ ಕುಟುಂಬದ ಇತಿಹಾಸವನ್ನು ಪ್ರಸ್ತುತ ಪಡಿಸಲು ಅವಕಾಶ ಕಲ್ಪಿಸಿಕೊಡಿ.
6. ಇದನ್ನು ಮುಂದುವರಿಸಿ, ಊರಿನ/ನಗರದ ಇತಿಹಾಸ ರಚಿಸಲು ಅಗತ್ಯವಿರುವ ಸಾಮಾನ್ಯ ಅಂಶಗಳನ್ನು ಪಟ್ಟಿ ಮಾಡಿಕೊಂಡು, ಊರಿನ/ನಗರದ ಇತಿಹಾಸ ರಚಿಸಲು ಪ್ರೋತ್ಸಾಹಿಸಿ.

II. ಯೋಜನೆ
ಈ ಚಟುವಟಿಕೆಯನ್ನು ಇತಿಹಾಸದಲ್ಲಿನ ಯಾವುದೇ ರಾಜಮನೆತನದ ಬಗ್ಗೆ ಪಾಠ ಬೋಧಿಸುವ ಮುನ್ನ ಮಾಡಬಹುದು.

III. ಶೈಕ್ಷಣಿಕ ತತ್ವ
ತನ್ನ ಕುಟುಂಬದ ಇತಿಹಾಸ ರಚಿಸಿ ಕೊಳ್ಳುವುದರ ಮೂಲಕ ಇತಿಹಾಸದ ಬಗ್ಗೆ ಅರ್ಥ ಮಾಡಿಕೊಳ್ಳುವುದು.

IV. ಮೌಲ್ಯ ಮಾಪನ
ಈ ಚಟುವಟಿಕೆಯನ್ನು ಮೌಲ್ಯಮಾಪನ ಮಾಡಲು ಈ ಕೆಳಕಂಡ ಚೆಕ್ ಲಿಸ್ಟ್ ಅನ್ನು ಬಳಸಬಹುದು.
ಕ್ರ.ಸಂ
ಅಂಶಗಳು
ಹೌದು/ಇಲ್ಲ
1
ಕುಟುಂಬ ಚರಿತ್ರೆಯನ್ನು ರಚಿಸಲು ಸೂಕ್ತ ಮಾಹಿತಿ ಸಂಗ್ರಹಿಸುವ ಪ್ರಯತ್ನ ಮಾಡಿದ್ದಾನೆ/ಳೆ.
2
ಕುಟುಂಬ ಚರಿತ್ರೆಯಲ್ಲಿ ದಾಖಲಿಸಿರುವ ವಿವಿಧ ಅಂಶಗಳಿಗಾಗಿ ಸರಿಯಾದ ಸಾಕ್ಷಾಧಾರಗಳನ್ನು ಒದಗಿಸಿದ್ದಾನೆ/ಳೆ.
3
ಕುಟುಂಬ ಚರಿತ್ರೆಯನ್ನು ಕ್ರಮಬದ್ಧವಾಗಿ ದಾಖಲಿಸಿದ್ದಾನೆ/ಳೆ.
4
ಕುಟುಂಬ ಇತಿಹಾಸ ಮಂಡನೆಯಲ್ಲಿ ವಿಶೇಷ ಆಸಕ್ತಿ ತೋರಿಸಿದ್ದಾನೆ/ಳೆ

Posted by,
Naveen Kumar
Social Science Coordinator

No comments:

Post a Comment