ತರಗತಿ : 5 ರಿಂದ 8
ಉದ್ದೇಶ : ಮಕ್ಕಳನ್ನು
ಓದಲು ಪ್ರೆರೇಪಿಸುವುದು.
ಚಟುವಟಿಕೆ ಮಾಡುವ
ವಿಧಾನ
- ಮಕ್ಕಳನ್ನು ವೃತ್ತಾಕಾರದಲ್ಲಿ ನಿಲ್ಲಿಸಿ.
- ವೃತ್ತದ ಮಧ್ಯದಲ್ಲಿ ಪುಸ್ತಕಗಳನ್ನು ಅವುಗಳ ಹೆಸರು ಕಾಣುವಂತೆ ಹರಡಿ.
- ವೃತ್ತದಲ್ಲಿರುವ ಮಕ್ಕಳಲ್ಲಿ ಯಾರದರೂ ಒಬ್ಬರು ಹರಡಿರುವ ಪುಸ್ತಕದಲ್ಲಿ ಯಾವುದಾದರೂ ಪುಸ್ತಕಕ್ಕೆ ಸಂಬಂಧಿಸಿದಂತೆ ವಾಕ್ಯವನ್ನು ಅಥವ ಹಾಡನ್ನು ಹೇಳುವುದರ ಮೂಲಕ ಸುಳಿವು ನೀಡಬೇಕು. ಉದಾ : ನಮ್ಮ ಶಾಲೆಯಲ್ಲಿ ಲೈಬ್ರೇರಿಯಲ್ಲಿ ತುಂಬಾ ಪುಸ್ತಕ ಇವೆ, ಅದರಲ್ಲಿ ಒಂದು ಪುಸ್ತಕದಲ್ಲಿ ಗಿಣಿಯಿದೆ,ಎಂದು ಹೇಳಿದರೆ, ಆ ಸುಳಿವಿನ ಆಧಾರದ ಮೇಲೆ ಇತರ ಸಹಪಾಠಿಗಳು ಆ ಪುಸ್ತಕವನ್ನು ಕಂಡುಹಿಡಿಯ ಬೇಕುಪುಸ್ತಕ ಹುಡುಕಿದ ಮಗು ವೃತ್ತದಿಂದ ಹೊರಗಡೆ ಬಂದು ಆ ಪುಸ್ತಕವನ್ನು ಮೌನವಾಗಿ ಓದಲು ಹೇಳಿ.
- ಪುಸ್ತಕ ಓದಲು ಮಕ್ಕಳಿಗೆ 10-15 ನಿಮಿಷ ಕಾಲವಕಾಶ ನೀಡಬೇಕು.
- ಎಲ್ಲಾ ಮಕ್ಕಳು ಪುಸ್ತಕ ತೆಗೆದುಕೊಳ್ಳುವವರೆಗೂ ಆಟ ಮಂದುವರೆಯಲಿ. ಮಕ್ಕಳು ಓದಿದ ನಂತರ ಅವರು ಓದಿದ ಪುಸ್ತಕದಲ್ಲಿ ತಮಗೆ ಇಷ್ಟವಾದ ಘಟನೆ, ಪಾತ್ರ, ಸಂಗತಿ, ಚಿತ್ರ, ವಾಕ್ಯವನ್ನು ತರಗತಿಯಲ್ಲಿ ಇತರ ಮಕ್ಕಳೊಡನೆ ಹಂಚಿಕೊಳ್ಳಲು ಅನುವು ಮಾಡಿಕೊಡಿ.
ಚಟುವಟಿಕೆ 2:
- ಶಿಕ್ಷಕರು ತಾವು ಓದಿದ ಪುಸ್ತಕದ ಹೆಸರಿನ ಸುಳಿವುಗಳನ್ನು ಚೀಟಿಯಲ್ಲಿ ಬರೆದು ಮಕ್ಕಳಿಗೆ ನೀಡಿ.
- ಮಕ್ಕಳು ತಮಗೆ ದೊರೆತ ಸುಳಿವುಗಳನ್ನು ಆಧರಿಸಿ,ಆ ಪುಸ್ತಕ ಪತ್ತೆ ಮಾಡುವಂತೆ ತಿಳಸಿ.
- ನಂತರ ಆ ಪುಸ್ತಕದಲ್ಲಿ ಮಕ್ಕಳು ತಮಗೆ ಇಷ್ಟವಾದ ಘಟನೆ, ಪಾತ್ರ, ಸಂಗತಿ, ಚಿತ್ರ, ವಾಕ್ಯವನ್ನು ತರಗತಿಯಲ್ಲಿ ಇತರ ಮಕ್ಕಳೊಡನೆ ಹಂಚಿಕೊಳ್ಳಲು ಅನುವು ಮಾಡಿಕೊಡಿ.
ಚಟುವಟಿಕೆ 3:
- ನಿಮ್ಮ ಶಾಲೆಯ ಗ್ರಂಥಾಲಯದಲ್ಲಿ ಒಂದು ಸೂಚನಾ ಫಲಕವನ್ನು ಇಟ್ಟು,ಅದರಲ್ಲಿ ಈ ದಿನದ ಪ್ರಶ್ನೆ ಎಂದು ಬರೆದು, ಅದರಲ್ಲಿ ನೀವು ಓದಿದ ಪುಸ್ತಕಕ್ಕೆ ಸಂಬಧಿಸಿದ ಪ್ರಶ್ನೆಯನ್ನು ಬರೆಯಿರಿ.
- ಆ ಪ್ರಶ್ನೆಗೆ ಗ್ರಂಥಾಲಯದಲ್ಲಿರುವ ಪುಸ್ತಕ ಓದಿ ಉತ್ತರ ಹುಡುಕಿ ಬರೆಯುವಂತೆ ಮಕ್ಕಳಿಗೆ ತಿಳಿಸಿ.
- ಅವರಿಗೆ ದೊರೆತ ಉತ್ತರವನ್ನು ತರಗತಿಯಲ್ಲಿ ಇತರ ಮಕ್ಕಳೊಡನೆ ಹಂಚಿಕೊಂಡು, ಆ ಪ್ರಶ್ನೆಗೆ ಉತ್ತರ ಸರಿಯೋ? ತಪ್ಪೋ? ಎಂದು ಚರ್ಚಿಸಲು ಅವಕಾಶ ಮಾಡಿಕೊಡಿ.
- ಹೀಗೆ ಪ್ರಶ್ನೆಗಳನ್ನು ಆಗಾಗ ಬದಲಾಯಿಸಿ.
ಸ್ವಾವಲೊಕನ :
ನಮ್ಮ ಶಾಲೆಯಲ್ಲಿ ಗ್ರಂಥಾಲಯ
ಮಾಡುವ ಮೊದಲು ನಾನು ಮಕ್ಕಳಿಗೆ ಇಷ್ಟವಾಗುವ ಕೆಲವೂಂದು ಆಯ್ದ ಪುಸ್ತಕಗಳನ್ನು
ಇಡುತ್ತಿದ್ದೆ. ಇಡುವಾಗ ಇದನ್ನು ಬಿಡುವಿನ ಸಮಯದಲ್ಲಿ ಓದಿ ಎಂದು ಹೇಳುತ್ತಿದ್ದೆ. ಆಗ
ಮಕ್ಕಳು ನಾನು ಹೇಳಿದ ದಿನ ಮಾತ್ರ ಓದುತ್ತಿದ್ದರು. ಮುಂದಿನ ದಿನಗಳಲ್ಲಿ ಕೆಲವೇ ಮಕ್ಕಳು
ಮಾತ್ರ ಓದುತ್ತಿದ್ದರು. ನಂತರ ಅವರೂ ಓದುವುದನ್ನು ನಿಲ್ಲಿಸಿಬಿಡುತ್ತಿದ್ದರು. ಕಾರಣ
ಕೇಳಿದರೆ ಓದಲು ಇಷ್ಟ ಇಲ್ಲ , ಬೇಜಾರು, ಸಮಯವಿಲ್ಲವೆಂದು ಉತ್ತರಿಸುತ್ತಿದ್ದರು. ಆಗ ನಾನು
ಏನು ಮಾಡಬೇಕೆಂದು ತಿಳಿಯದೆ ಅವರು ಇಷ್ಟ ಬಂದಾಗ ಓದಲಿ ಎಂದು ಅವರ ತರಗತಿಯಲ್ಲೆ
ಪುಸ್ತಕಗಳನ್ನು ಇಡುತ್ತಿದ್ದೆ. ಆ ಪುಸ್ತಕಗಳ ಮೇಲೆ ಧೂಳು ಇಡಿಯಿತೇ ಹೊರತು ಮಕ್ಕಳು ಓದಲಿಲ್ಲ.
ನಾನು ನನ್ನನ್ನೆ ಪ್ರಶ್ನೆ ಮಾಡಿಕೊಂಡಾಗ ನನಗೆ ಅನಿಸಿದ್ದು ನಾನೆ ಪುಸ್ತಕಗಳನ್ನು ಓದುತ್ತಿರಲಿಲ್ಲ
ನಂತರ ನಾನು ಪುಸ್ತಕ ಓದುವುದನ್ನು ಅಬ್ಯಾಸ ಮಾಡಿಕೊಂಡೆ. ಆದರೆ ಈ ರೀತಿ ನಾ ಮಾಡಲು
ಕಾರಣ ಶ್ರೀಮತಿ ಉಷಾ ಮುಕುಂದರವರು ಇವರು ನಮಗೆ ಪುಸ್ತಕಗಳ ಮಹತ್ವವನ್ನು ತಿಳಿಸಿಕೊಟ್ಟರು.
ಹಾಗೂ ಅವರು ಗ್ರಂಥಾಲಯ ಮಾಡಲು ಬಳಸಿದ ತಂತ್ರಗಳು ನನಗೆ ಇಷ್ಟವಾಯಿತು. ಆದರೆ
ಇಷ್ಟು ದಿನ ನಾನು ಗ್ರಂಥಾಲಯ ಮಾಡಲು ದೊಡ್ಡ ಸ್ಥಳ ಬೇಕು, ಪುಸ್ತಕಗಳನ್ನು ಇಡಲು ಹಲಗೆಗಳು
ಪ್ರತ್ಯೇಕ ಕೊಠಡಿ ಬೇಕು ಎಂದು ತಿಳಿದಿದ್ದೆ. ಆದರೆ ಅವರು ನಮ್ಮಿಂದಲೆ ತರಗತಿಯ ಒಂದು ಮೂಲೆಯಲ್ಲಿ
ಗ್ರಂಥಾಲಯ ಮಾಡಿಸಿದರು. ಆಗ ನಾವು ಇದನ್ನು ಮಾಡಬಹುದಾಗಿತ್ತಲ್ಲ? ಏಕೆ ಈ ರೀತಿ
ಯೊಚಿಸಲಿಲ್ಲ? ಎಂದೆನಿಸಿತು. ನಂತರ ನಾನು ನಮ್ಮ ಶಾಲೆಯಲ್ಲಿ ಗ್ರಂಥಾಲಯ
ಮಾಡಲು ಮುಂದಾದೆ ಆದರೆ ಈ ಬಾರಿ ಕೇವಲ ಪುಸ್ತಕಗಳನ್ನು ತರಗತಿಯಲ್ಲಿ ಇಡುವುದು ಆಗಿರಲಿಲ್ಲ.
ಬದಲಾಗಿ ಮಕ್ಕಳು ಪುಸ್ತಕ ಓದುವಂತೆ ಅವರನ್ನು ಪ್ರೇರೇಪಿಸುವುದು ನನ್ನ
ಉದ್ದೇಶವಾಗಿತ್ತು. ಅಂದಿನಿಂದ ನಾನು ಬಿಡುವಿನ ಸಮಯದಲ್ಲಿ ಪುಸ್ತಕ ಓದುವುದನ್ನು ಅಭ್ಯಾಸ
ಮಾಡಿಕೊಂಡೆ. ಹಾಗೂ ಶಾಲೆಯಲ್ಲಿನ ಕಥೆ ಪುಸ್ತಕಗಳನ್ನು ಮಕ್ಕಳ ಸಹಾಯದಿಂದ ಅವುಗಳನ್ನು
ಹಂತಗಳನುಸಾರವಾಗಿ ವಿಂಗಡಿಸಿದೆವು. ನಂತರ ಒಂದು ತರಗತಿಯಲ್ಲಿ ಬೆಂಚುಗಳನ್ನು ಇಟ್ಟು ಅವುಗಳ
ಮೇಲೆ ಜೋಡಿಸಿದೆ .ಹೀಗೆ ಮಾಡುವಾಗ ಮಕ್ಕಳು ಏಕೆ ಈ ರೀತಿ ಮಾಡುತ್ತಿದ್ದೀರಿ ಎಂದು ಕೇಳಿದರು. ನಾನೂ
ಸುಮ್ಮನಿದ್ದೆ. ಆಗ ಒಬ್ಬ ಹುಡುಗ ಇದು ಲೈಬ್ರರಿ ಕಣೊ ಎಂದ. ಸಾರ್ ನಾವು ಈ
ಪುಸ್ತಕಗಳನ್ನು ಓದಬಹುದಾ? ಮನೆಗೆ ತೆಗೆದುಕೊಂಡು ಹೊಗಬಹುದಾ? ಎಂದು ಕೇಳಿದ. ನಾನು ಹೌದು ಎಂದಾಗ
ಅವನು ಪುಸ್ತಕವನ್ನು ಓದಲು ತೊಡಗಿದ. ಗ್ರಂಥಾಲಯದಲ್ಲಿ ಕೇವಲ ಪುಸ್ತಕ ಓದುವುದಲ್ಲದೆ ಮಕ್ಕಳು
ಚಿತ್ರ ಬರೆಯಲು ಕಥೆ ಬರೆಯಲು ಕಥೆ ಹೇಳಲು ಅವಕಾಶವನ್ನು ನೀಡಿದ್ದೆ. ವಿಶೇಷವೆಂದರೆ ತರಗತಿಯ ಹೊರಗೆ
ಕಥೆ ಹೇಳಲು, ಬರೆಯಲು, ಕಥೆ ಕಟ್ಟಲು ಮಕ್ಕಳಿಗೆ ಬಹಳ ಇಷ್ಟವಾಯಿತು. ಮಕ್ಕಳು
ಬಿಡುವಿನ ಸಮಯದಲ್ಲಿ ಪುಸ್ತಕಗಳನ್ನು ಓದಲು ಆರಂಬಿಸಿದರು . ಹೀಗೆ ಓದುವಾಗ ಪುಸ್ತಕಗಳನ್ನು
ಎಲ್ಲೆಂದರಲ್ಲಿ ಬಿಸಾಡುತ್ತಿದ್ದರು. ಈ ಸಮಯದಲ್ಲಿ ನಾನು ಒಂದು ವಾರ ಶಾಲೆಗೆ ಹೊಗಿರಲಿಲ್ಲ.
ನಾನು ಮತ್ತೆ ಶಾಲೆಗೆ ಬಂದಾಗ ಗ್ರಂಥಾಲಯ ಪುಸ್ತಕಗಳ ಗೋಧಾಮಿನಂತೆ ಕಾಣುತ್ತಿತ್ತು.
ತರಗತಿಯಲ್ಲಿ ಈ ಬಗ್ಗೆ ಮಾತನಾಡಿ ಎಲ್ಲರು ಸೇರಿ ಪುಸ್ತಕಗಳು ಹಾಳಾಗದಂತೆ ಕೆಲವು
ಒಪ್ಪಂದಗಳನ್ನು ಮಾಡಿಕೊಂಡೆವು. ನಂತರ ನಾನು ಮಕ್ಕಳನ್ನು ತರಗತಿ ಆಚೆ ಕರೆತಂದು ಅವರನ್ನು
ವೃತ್ತಾಕಾರದಲ್ಲಿ ನಿಲ್ಲಿಸಿ ಅವರ ಮಧ್ಯೆ ಕೆಲವು ಪುಸ್ತಕಗಳನ್ನು ಇಟ್ಟು ಸಣ್ಣ ಆಟದ ಮೂಲಕ ಪುಸ್ತಕ
ತೆಗೆದುಕೊಂಡು ಓದಿದೆವು. ಮಕ್ಕಳು ಓದಿದ ಪುಸ್ತಕದಲ್ಲಿ ತಮಗೆ ಇಷ್ಟವಾದದನ್ನು
ಅನಿಸಿಕೆಯನ್ನು ಕಥೆ ಕಟ್ಟೆಯ ಮುಂದೆ ಹಂಚಿಕೊಂಡೆವು. ಇದು ಮಕ್ಕಳಿಗೆ ಇಷ್ಟವಾಗಿದ್ದು, ಈ
ಪ್ರಕ್ರಿಯೆ ಮುಂದುವರಿಯುತ್ತಿದೆ.
Posted by
PRADEEP, BBMP School
Joguplaya




