ಹಂತ 3 : ತರಗತಿ 6 ರಿಂದ 8
ವಿಷಯ : ಊರಿನ/ನಗರದ ಇತಿಹಾಸ.
ಉದ್ದೇಶ : ಸ್ಥಳೀಯ ಇತಿಹಾಸ ತಿಳಿಸುವುದು.
ಸಾಮಾನ್ಯ ಸೂಚನೆಗಳು
: ಒಂದೇ ಗ್ರಾಮದ ಮಕ್ಕಳನ್ನು ಗುರುತಿಸಿ ಗುಂಪು ರಚಿಸಿ.
I. ಸೂಚನೆಗಳು
1. ತರಗತಿಯ ಮಕ್ಕಳನ್ನು ಅನೇಕ ಗುಂಪುಗಳಾಗಿ ವಿಂಗಡಿಸಿ.
2. ಪ್ರತಿ ಗುಂಪಿಗೂ ಈ ಕೆಳಕಂಡಂತೆ ನೀಡಿರುವ ಅಂಶಗಳಲ್ಲಿ ಮಾಹಿತಿ ಸಂಗ್ರಹಿಸಿ ಕೊಂಡು ಬರುವಂತೆ ತಿಳಿಸಿ.
a. ಊರಿನ ಹೆಸರು ಮತ್ತು ಹೆಸರಿನ ಹಿನ್ನಲೆ.
b. ಊರಿಗೆ ಮೊದಲು ಬಂದು ನೆಲೆಸಿದವರ ಮಾಹಿತಿ (ಲಭ್ಯವಿದ್ದಲ್ಲಿ
ಮಾತ್ರ).
c. ಊರಿನಲ್ಲಿರುವ ಪುರಾತನ ಸ್ಥಳಗಳ ಬಗೆಗಿನ ಮಾಹಿತಿ.
ಉದಾ :- ದೇವಾಲಯ, ಚರ್ಚ್, ಮಸೀದಿ, ಸ್ಮಾರಕ,ಶಾಸನಗಳ ಬಗೆಗಿನ ಮಾಹಿತಿ.
d. ಊರ ದೇವತೆ/ಗ್ರಾಮದೇವತೆ/ನಾಡ ದೇವತೆಯ ಕುರಿತಾದ ದಂತಕತೆ/ಪೌರಾಣಿಕ ಕಥೆಗಳು/ಜನಪದ ಕಥೆ ಇತರ ಮಾಹಿತಿ.
e. ಊರಿನಲ್ಲಿ ಆಚರಿಸುವ ಹಬ್ಬಗಳ ಬಗೆಗಿನ ಮಾಹಿತಿ.
f. ಊರನ್ನು ಇದುವರೆವಿಗೂ ಆಳ್ವಿಕೆ ಮಾಡಿರುವ ರಾಜಮನೆತನ ಮತ್ತು ಪ್ರಮುಖ ಅರಸರ ಕುರಿತಾಗಿ ದೊರಕುವ ಸಾಕ್ಷ್ಯಗಳು (ಲಭ್ಯವಿದ್ದಲ್ಲಿ
ಮಾತ್ರ).
g. ಇದುವರೆವಿಗೂ ಊರಿನಲ್ಲಿ ಸಂಭವಿಸಿರುವ ಪ್ರಮುಖ ಘಟನೆಗಳ ಮಾಹಿತಿ.
h. ಊರಿನಲ್ಲಿರುವ ಅತ್ಯಂತ ಹಳೆಯ ಕಟ್ಟಡಗಳ ರಚನಾ ಶೈಲಿಗೂ, ಪ್ರಸ್ಥುತ ಕಟ್ಟಿರುವ ಕಟ್ಟಡಗಳ ರಚನಾ ಶೈಲಿಗೂ ಇರುವ ಸಾಮ್ಯತೆ ಮತ್ತು ಆಗಿರುವಂತ ಬದಲಾವಣೆಗಳು. (ಸಾಧ್ಯವಾದಲ್ಲಿ ಚಿತ್ರಗಳ ಮುಖೇನ ವ್ಯಕ್ತ ಪಡಿಸಲಿ)
i. ಊರಿನಲ್ಲಿ ಹರಿಯುವ ನದಿ, ಕೆರೆ, ಹಳ್ಳ, ಕೊಳ,ಝರಿ, ಜಲಪಾತ ಮೊದಲಾದವುಗಳ ಬಗೆಗಿನ ಮಾಹಿತಿ.
j. ಊರಿನ ಪ್ರಸ್ತುತ ಮತ್ತು ವಿವಿಧ ಕಾಲಘಟ್ಟ(ಅವಧಿ)ಗಳ ಭೂಪಟ. (ಸುಲಭವಾಗಿ ದೊರಕುವಂತಿದ್ದರೆ ವೆಬ್ ಸೈಟ್ ಅಥವಾ ಗ್ರಾಮ ಪಂಚಾಯತ್/ನಗರ ಸಭೆ ಕಾರ್ಯಾಲಯಗಳಿಂದ
ಪಡೆದು ದಾಖಲಿಸುವುದು)
k. ಊರಿನಲ್ಲಿ ಜನರು ಹಿಂದೆ ಅವಲಂಭಿಸಿದ ವೃತ್ತಿಗಳಿಗೂ ಮತ್ತು ಈಗ ಮಾಡುತ್ತಿರುವ ವೃತ್ತಿಗಳ ಬಗೆಗಿನ ಮಾಹಿತಿ.
l. ಊರಿನ ಜನಸಂಖ್ಯೆ (ವಿವಿಧ ದಶಕಗಳ ಜನಸಂಖ್ಯಾ ಪ್ರಮಾಣ - ಜನಗಣತಿ ಅಂಕಿ-ಅಂಶದ ನೆರವಿನಿಂದ)
3. ಮಕ್ಕಳು ಈ ಮೇಲ್ಕಂಡ ಅಂಶಗಳಿಗೆ ಮಾಹಿತಿಯನ್ನು ಕುಟುಂಬ ಸದಸ್ಯರು ಮತ್ತು ಗ್ರಾಮಸ್ಥರನ್ನು
ಸಂದರ್ಶನ ಹಾಗೂ ಸರ್ಕಾರಿ ದಾಖಲೆಗಳು, ವೆಬ್ ಸೈಟ್ ಮತ್ತು ಸಮೂಹ ಮಾದ್ಯಮಗಳ ನೆರವಿನಿಂದ ಆಧಾರ(ಸಾಕ್ಷ್ಯ) ಸಹಿತ ಮಾಹಿತಿ ಸಂಗ್ರಹಿಸುವಂತೆ ತಿಳಿಸಿ.
4. ಮಾಹಿತಿ ಕೊಟ್ಟವರ ಹೆಸರು ಮತ್ತು ಮಾಹಿತಿ ಸಂಗ್ರಹಣೆಗೆ ನೆರವಾದ ವಿವಿಧ ಸಾಕ್ಷ್ಯಗಳ ಬಗ್ಗೆಯೂ ಮಾಹಿತಿ ದಾಖಲಿಸುವಂತೆಯು
ತಿಳಿಸಿ.
5. ಸಂಗ್ರಹಿಸಿದ ಮಾಹಿತಿಯನ್ನು ಕ್ರಮಬದ್ಧವಾಗಿ ದಾಖಲಿಸುವ ವಿಧಾನದ ಮಾರ್ಗದರ್ಶನ ನೀಡಿರಿ.
6. ಹೀಗೆ ದಾಖಲಿಸಿದ ಮಾಹಿತಿಯಿಂದ ಯಾವ ರೀತಿಯ ಪ್ರಯೋಜನವಿರಬಹುದು
ಎನ್ನುವುದರ ಕುರಿತಾಗಿ ಚರ್ಚೆ ನಡೆಸಿ. (ಮಾತನಾಡಲು ಬಾರದ ಮಕ್ಕಳು ತಮ್ಮ ವಿಚಾರಗಳನ್ನು ಸಜ್ಞೆಯ ಮುಖಾಂತರ/ಲಿಖಿತ ರೂಪದಲ್ಲಿ ಬರೆದು ವ್ಯಕ್ತ ಪಡಿಸಲಿ)
7. ನಂತರ ಮಕ್ಕಳು ರಚಿಸಿದ ಊರಿನ ಇತಿಹಾಸವನ್ನು ಪ್ರಸ್ತುತ ಪಡಿಸಲು ಅವಕಾಶ ಕಲ್ಪಿಸಿ.
II. ಯೋಜನೆ
ಈ ಚಟುವಟಿಕೆಯನ್ನು
ಇತಿಹಾಸದಲ್ಲಿ ಬರುವ ಯಾವುದೇ ಸಾಮ್ರಾಜ್ಯ ಅಥವಾ ಯಾವುದೇ ಪ್ರದೇಶಗಳ ಬಗ್ಗೆ ಪಾಠ ಮಾಡುವ ಮೊದಲು ಮಾಡುವುದು ಉತ್ತಮ.
III. ಶೈಕ್ಷಣಿಕ ತತ್ವ
ಪ್ರತೀ ಊರು/ ನಗರಗಳೂ ಸಹ ತಮ್ಮದೆ ಆದ ಇತಿಹಾಸವನ್ನು ಹೊಂದಿವೆ ಎಂಬುದನ್ನು ಅರ್ಥ ಮಾಡಿಸುವುದು.
IV. ಮೌಲ್ಯ ಮಾಪನ
ಈ ಚಟುವಟಿಕೆಯನ್ನು
ಮೌಲ್ಯಮಾಪನ ಮಾಡಲು ಈ ಕೆಳಕಂಡ ಚೆಕ್ ಲಿಸ್ಟ್ ಬಳಸಿ.
ಕ್ರ.ಸಂ
|
ಅಂಶಗಳು
|
ಹೌದು/ಇಲ್ಲ
|
1
|
ಊರಿನ
ಚರಿತ್ರೆಯನ್ನು ರಚಿಸಲು ನೀಡಿರುವ ತನಿಖಾ ಪ್ರಶ್ನೆಗಳಿಗೆ ಸೂಕ್ತ ಉತ್ತರಗಳನ್ನು ಕಂಡುಕೊಂಡಿರುವನು/ಳು.
|
|
2
|
ಊರಿನ
ಇತಿಹಾಸ ರಚನೆ
ಮಾಡುವಾಗ ದಾಖಲಿಸಿರುವ ವಿವಿಧ ಅಂಶಗಳಿಗಾಗಿ ಸರಿಯಾದ ಸಾಕ್ಷ್ಯಾಧಾರಗಳನ್ನು ಒದಗಿಸುವ ಪ್ರಯತ್ನ ಮಾಡಿದ್ದಾನೆ/ಳೆ.
|
|
3
|
ಊರಿನ
ಚರಿತ್ರೆಯನ್ನು ಸರಿಯಾದ ಕ್ರಮದಲ್ಲಿ ದಾಖಲಿಸಿದ್ದಾನೆ/ಳೆ.
|
|
4
|
ಊರಿನ
ಇತಿಹಾಸ ರಚಿಸಲು ತುಂಬಾ ಆಸಕ್ತಿ ತೋರುವನು/ಳು.
|
|
5
|
ಊರಿನ
ಇತಿಹಾಸವನ್ನು ಮಂಡಿಸಲು ಆಸಕ್ತಿ ತೋರುವನು/ಳು.
|
Posted by,
Naveen Kumar
Social Science Coordinator
Naveen Kumar
Social Science Coordinator
No comments:
Post a Comment