Tuesday, 12 September 2017

ಅಣುಕು ಚುನಾವಣೆ

ತರಗತಿ : 6 ರಿಂದ 8
ವಿಷಯ  : ಅಣುಕು ಚುನಾವಣೆ
ಉದ್ದೇಶ : ಚುನಾವಣಾ ಪದ್ಧತಿಯ ಬಗ್ಗೆ ಮಕ್ಕಳಿಗೆ ಅರಿವು ಮೂಡಿಸುವುದು.
ಸಾಮಾನ್ಯ ಸೂಚನೆಗಳು : ಎಲ್ಲಾ ವಿದ್ಯಾರ್ಥಿಗಳಿಗೂ ಅನುಕೂಲಕರವಾದ ಕೊಟ್ಟಡಿಯಲ್ಲಿ ಚುನಾವಣೆ ನಡೆಸಿ.
I.  ಸೂಚನೆಗಳು

1. ಅಣುಕು ವಿದ್ಯಾರ್ಥಿ ಚುನಾವಣೆ ನಡೆಸಲು 3 ಹಂತಗಳ ಕಾರ್ಯ ನಿರ್ವಹಣೆ ಅಗತ್ಯ. ಅವುಗಳೆಂದರೆ
                                          i.    ಚುನಾವಣಾ ಪೂರ್ವ ಕಾರ್ಯಗಳು.
                                         ii.    ಚುನಾವಣಾ ದಿನದ ಕಾರ್ಯಗಳು.
                                        iii.    ಚುನಾವಣಾ ನಂತರ ಕಾರ್ಯಗಳು.
ವಿವರಣೆ

i. ಚುನಾವಣಾ ಪೂರ್ವ ಕಾರ್ಯಗಳು.
(ಅ) ಚುನಾವಣೆಯನ್ನು ಯಾವ ಸ್ಥಾನಗಳಿಗೆ ನಡೆಸ ಬೇಕೆಂಬುದನ್ನು ನಿರ್ಧಿಷ್ಟ ಪಡಿಸಿಕೊಳ್ಳಿ.
ಉದಾಹರಣೆಗೆ – ತರಗತಿಯ ನಾಯಕ ಮತ್ತು ಉಪನಾಯಕ, ವಿದ್ಯಾರ್ಥಿ ಸಂಘದ ನಾಯಕ ಮತ್ತು ಉಪನಾಯಕ, ವಿದ್ಯಾರ್ಥಿ ಮಂತ್ರಿ ಪರಿಷತ್ ನ ಮಂತ್ರಿ ಸ್ಥಾನಗಳು.
(ಆ) ಚುನಾವಣೆಗೆ ಸಂಬಂಧಿಸಿದ ಪ್ರಮುಖ ದಿನಾಂಕಗಳನ್ನು ಘೋಷಿಸಿರಿ.
ಉದಾಹರಣೆಗೆ – ಚುನಾವಣಾ ದಿನಾಂಕ, ಅರ್ಜಿ ಸಲ್ಲಿಸುವ ಪ್ರಾರಂಭ ಮತ್ತು ಕೊನೆಯ ದಿನಾಂಕ, ಪ್ರಚಾರ ಮಾಡಲು ಪ್ರಾರಂಭ ಮತ್ತು ಕೊನೆಯ ದಿನಾಂಕ, ಚುನಾವಣಾ ಫಲಿತಾಂಶ ಪ್ರಕಟಿಸುವ ದಿನಾಂಕ, ಇತ್ಯಾದಿ.
(ಇ) ಹೆಣ್ಣು ಮಕ್ಕಳು ಮತ್ತು ವಿಶೇಷ ಚೇತನ ಮಕ್ಕಳನ್ನು ಚುನಾವಣೆಯಲ್ಲಿ ಸ್ಪರ್ಧಿಸುವಂತೆ ಪ್ರೋತ್ಸಾಹಿಸಿ.
(ಈ) ಚುನಾವಣೆಯಲ್ಲಿ ಸ್ಪರ್ಧಿಸಬಯಸುವವರ ಹೆಸರುಗಳನ್ನು ನೋಂದಣಿ ಮಾಡಿಕೊಂಡು ಮತ್ತು ಅಗತ್ಯವಿದ್ದರೆ ಚಿನ್ಹೆಗಳನ್ನು ನೀಡಿ.
(ಉ) ಮತದಾನ ನಡೆಯುವ ಸ್ಥಳವನ್ನು(ವಿಶೇಷ ಚೇತನರಿಗೆ ಅನುಕೂಲಕರವಾದ ಸ್ಥಳ) ಬಹಿರಂಗ ಪಡಿಸಿ.
(ಊ) ಚುನಾವಣೆಯಲ್ಲಿ ಸ್ವರ್ಧಿಸುವ ಅಭ್ಯರ್ಥಿಗಳಿಗೆ ಚುನಾವಣಾ ಪ್ರಚಾರ ಮಾಡಲು ಅವಕಾಶ ನೀಡಿ.(ಮಾತನಾಡಲು ಬಾರದ ಮಕ್ಕಳು ಸಂಜ್ಞೆಯ ಮುಖಾಂತರ ಅಥವಾ ಬಿತ್ತಿಪತ್ರ ಬಳಸಿ ಪ್ರಚಾರ ಮಾಡುವಂತೆ ತಿಳಿಸಿರಿ)

ii. ಚುನಾವಣಾ ದಿನದ ಕಾರ್ಯಗಳು.
(ಅ) ನಿರ್ದಿಷ್ಟ ದಿನಾಂಕದಂದು ಚುನಾವಣೆಯನ್ನು ಮತ ಪಟ್ಟಿಗೆ (ರಟ್ಟಿನಿಂದ ತಯಾರಿಸಿ) ಬಳಸಿ ಮತದಾನಕ್ಕೆ ಸಿದ್ಧತೆ ಮಾಡಿಕೊಳ್ಳಿ.
(ಆ) ಮಕ್ಕಳಿಗೆ ತಮ್ಮ ಆಯ್ಕೆಯ ಅಭ್ಯರ್ಥಿಯ ಹೆಸರು ಮತ್ತು ಚನ್ಹೆಯನ್ನು ಚೀಟಿಯಲ್ಲಿ ಬರೆದು ಮತದಾನ ಮಾಡುವಂತೆ ತಿಳಿಸಿ.

iii. ಚುನಾವಣಾ ನಂತರ ಕಾರ್ಯಗಳು.
(ಅ) ಮತ ಎಣಿಕೆ ಮಾಡಲು ಹಿರಿಯ ತರಗತಿಯ ವಿದ್ಯಾರ್ಥಿಗಳನ್ನು ನೇಮಿಸಿ, ಅಭ್ಯರ್ಥಿಗಳ ಸಮ್ಮುಖದಲ್ಲಿ ಮತಗಣನೆ ಮಾಡುವುದು.
(ಆ) ವಿಜೇತ ಅಭ್ಯರ್ಥಿಗಳ ಹೆಸರುಗಳನ್ನು ಪ್ರಕಟಿಸುವುದು.
(ಇ) ಮುಖ್ಯ ಶಿಕ್ಷಕರಿಂದ ವಿಜೇತ ಅಭ್ಯರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಿ, ಪ್ರಮಾಣ ವಚನವನ್ನು ಬೋಧಿಸುವುದು.
2. ಚುನಾವಣಾ ಕಾರ್ಯಗಳು ಸಂಪೂರ್ಣ ಮುಗಿದ ನಂತರ ಮಕ್ಕಳೊಂದಿಗೆ ನೈಜ ಚುನಾವಣೆಗೂ ಮತ್ತು ಶಾಲೆಯಲ್ಲಿ ನಡೆಸಿದ ಅಣುಕು ಚುನಾವಣೆಗೆ ಇರುವ ಸಾಮ್ಯತೆ ಮತ್ತು ವ್ಯತ್ಯಾಸಗಳ ಕುರಿತು ಚರ್ಚೆ ಮಾಡಿ.

II. ಶೈಕ್ಷಣಿಕ ತತ್ವ
ನೈಜ ಚುನಾವಣಾ ಪದ್ಧತಿಯ ಬಗ್ಗೆ ಅರಿವು ಮೂಡಿಸುವುದರ ಜೊತೆಗೆ ಮಕ್ಕಳಲ್ಲಿ ನಾಯಕತ್ವ ಗುಣ, ರಾಜಕೀಯ ತರಬೇತಿ ನೀಡುವುದು.
   
III. ಯೋಜನೆ
ಈ  ಚಟುವಟಿಕೆಯನ್ನು  ಪೌರನೀತಿಯಲ್ಲಿ ಬರುವ ಚುನಾವಣಾ ಘಟಕವನ್ನು ಬೋಧನೆ ಮಾಡುವ ಸಂದರ್ಭದಲ್ಲಿ ಮಾಡಬಹುದು.
  
IV. ಮೌಲ್ಯ ಮಾಪನ
ಈ ಚಟುವಟಿಕೆಯ ಮೌಲ್ಯಮಾಪನಕ್ಕಾಗಿ ಈ  ಕೆಳಗಿನ KWL ನಕ್ಷೆ ಬಳಸಬಹುದು.
 ಚುನಾವಣಾ ವ್ಯವಸ್ಥೆ
ನನಗೆ ತಿಳಿದಿರುವುದು
ತಿಳಿಯ ಬಯಸುವುದು
ನಾನು ತಿಳಿದಿದ್ದು









Posted by,
Naveen Kumar
Social Science Coordinator

No comments:

Post a Comment