ತರಗತಿ : 5 ರಿಂದ 8
ವಿಷಯ : ಕುಟುಂಬದ
ಪ್ರಕಾರ
ಉದ್ದೇಶ : ಕುಟುಂಬದ ಪ್ರಕಾರಗಳನ್ನು ಅರ್ಥ ಮಾಡಿಸುವುದು.
ಸಾಮಾನ್ಯ ಸೂಚನೆಗಳು : ಕುಟುಂಬದ ಅರ್ಥ ಮತ್ತು ಸಂಬಂಧಗಳ ಅರಿವು ಮಕ್ಕಳಲ್ಲಿ ಇರಬೇಕು
I. ಸೂಚನೆಗಳು
1. ಕುಟುಂಬದ ಸದಸ್ಯರೊಂದಿಗಿನ ಸಂಬಂಧಗಳ ಬಗ್ಗೆ ಮಕ್ಕಳಿಗೆ ಅರ್ಥ
ಮಾಡಿಸಿ.
ಉದಾ :– ಮುತ್ತಜ್ಜ - ತಾತನ ಅಪ್ಪ,
ಮುತ್ತಜ್ಜಿ - ತಾತನ ಅಮ್ಮ, ಕೋಲು ತಾತ- ಮುತ್ತಜ್ಜನ ಅಪ್ಪ, ಕೋಲು ಅಜ್ಜಿ-ಮುತ್ತಜ್ಜನ ಅಮ್ಮ ಇತ್ಯಾದಿ.
2. ನಂತರ ಮೂರರಿಂದ ನಾಲ್ಕು ಮಕ್ಕಳನ್ನು ಒಳಗೊಂಡ ವಿವಿಧ ಗುಂಪುಗಳನ್ನು
ರಚಿಸಿ.
3. ಪ್ರತಿ ಗುಂಪಿಗೂ ವಿಭಿನ್ನ ರಸ್ತೆಗಳ ಕನಿಷ್ಠ 10 ಮನೆಗಳನ್ನು
ಸಂದರ್ಶಿಸಿ, ಈ ಕೆಳಗಿನ ಸಮೀಕ್ಷಾ ಪ್ರಶ್ನೆಗಳಿಗೆ ಉತ್ತರ ಕಂಡುಕೊಂಡು ಬರುವಂತೆ ತಿಳಿಸಿ.
ಕ್ರ.ಸಂ
|
ಸಮೀಕ್ಷಾ ಪ್ರಶ್ನೆಗಳು
|
ಮಾಹಿತಿ
|
1
|
ಕುಟುಂಬದ ಮುಖ್ಯಸ್ಥರ ಹೆಸರು ಮತ್ತು ಲಿಂಗ
|
|
2
|
ಇತರ ಸದಸ್ಯರುಗಳ ಹೆಸರು ಮತ್ತು ಕುಟುಂಬದ ಮುಖ್ಯಸ್ಥರೊಂದಿಗೆ ಸದಸ್ಯರುಗಳ ಸಂಬಂಧ
ಮೊದಲನೇ
ಸದಸ್ಯ
ಎರಡನೇ
ಸದಸ್ಯ
ಮೂರನೇ
ಸದಸ್ಯ
ನಾಲ್ಕನೇ
ಸದಸ್ಯ
(ಅಗತ್ಯಕ್ಕೆ ತಕಷ್ಟು ಆಯ್ಕೆಗಳನ್ನು ಬರೆದುಕೊಳ್ಳಿ)
|
|
3
|
ಕುಟುಂಬದ ಒಟ್ಟು ಸದಸ್ಯರ ಸಂಖ್ಯೆ
|
4. ನಂತರ ತನಿಖಾ ಪ್ರಶ್ನೆಗಳನ್ನು ಆಧಾರವಾಗಿಟ್ಟುಕೊಂಡು ಕುಟುಂಬದ ಪ್ರಕಾರವನ್ನು ಪತ್ತೆ ಮಾಡುವ ವಿಧಾನವನ್ನು ಮಕ್ಕಳಿಗೆ
ತಿಳಿಸಿಕೊಡಿ.
(ಅ)
ಕುಟುಂಬದ ಸಂಖ್ಯೆ ಮತ್ತು ತಲೆಮಾರುಗಳ ಆಧಾರದ ಮೇಲೆ ವಿಭಕ್ತ ಮತ್ತು ಅವಿಭಕ್ತ ಕುಟುಂಬದ ಪ್ರಕಾರವನ್ನು
ಕಂಡು ಹಿಡಿಯುವುದು.
(ಆ)
ಕುಟುಂಬದ ಮುಖ್ಯಸ್ಥರ ಲಿಂಗದ ಆಧಾರದ ಮೇಲೆ ಮಾತೃ ಪ್ರಧಾನ ಮತ್ತು ಪಿತೃ ಪ್ರಧಾನ ಕುಟುಂಬವನ್ನು ಕಂಡು
ಹಿಡಿಯುವುದು.
5. ನಂತರ ಮೇಲೆ ತಿಳಿಸಿದ ಸಮೀಕ್ಷಾ ಪ್ರಶ್ನೆಗಳನ್ನು ಆಧರಿಸಿ ತಮ್ಮ-ತಮ್ಮ
ಕುಟುಂಬದ ಪ್ರಕಾರವನ್ನು ಪತ್ತೆ ಮಾಡುವಂತೆ ಮಕ್ಕಳಿಗೆ ತಿಳಿಸಿ.
II. ಶೈಕ್ಷಣಿಕ ತತ್ವ
ಕುಟುಂಬದ ವಿಧಗಳನ್ನು ಸಮೀಕ್ಷಾ ವಿಧಾನದ ಮೂಲಕ ವ್ಯಾಖ್ಯಾನಿಸುವುದು.
ಕುಟುಂಬದ ವಿಧಗಳನ್ನು ಸಮೀಕ್ಷಾ ವಿಧಾನದ ಮೂಲಕ ವ್ಯಾಖ್ಯಾನಿಸುವುದು.
III. ಯೋಜನೆ
ಈ ಚಟುವಟಿಕೆಯನ್ನು ಸಮಾಜ ವಿಜ್ಞಾನ ಕುಟುಂಬ ಪಾಠವನ್ನು ಬೋಧನೆ ಮಾಡುವಾಗ ಬಳಸಬಹುದು.
ಈ ಚಟುವಟಿಕೆಯನ್ನು ಸಮಾಜ ವಿಜ್ಞಾನ ಕುಟುಂಬ ಪಾಠವನ್ನು ಬೋಧನೆ ಮಾಡುವಾಗ ಬಳಸಬಹುದು.
IV. ಮೌಲ್ಯ ಮಾಪನ
ಈ ಚಟುವಟಿಕೆಗಾಗಿ ಈ ಕೆಳಗಿನ ಚೆಕ್ ಲಿಸ್ಟ್ ಬಳಸಬಹುದು.
ಈ ಚಟುವಟಿಕೆಗಾಗಿ ಈ ಕೆಳಗಿನ ಚೆಕ್ ಲಿಸ್ಟ್ ಬಳಸಬಹುದು.
ಕ್ರ.ಸಂ
|
ಅಂಶಗಳು
|
ಹೌದು/ಇಲ್ಲ
|
1
|
ಕುಟುಂಬ ಸದಸ್ಯರೊಂದಿಗಿನ ಸಂಬಂಧವನ್ನು ಅರ್ಥ ಮಾಡಿಕೊಂಡಿದ್ದಾನೆ/ಳೆ
| |
2
|
ಸಮೀಕ್ಷೆಯಲ್ಲಿ ಪಾಲ್ಗೊಳ್ಳಲು ಆಸಕ್ತಿಯನ್ನು ತೊರುವನು/ಳು
| |
3
|
ಸಮೀಕ್ಷೆಯಲ್ಲಿ ಸಂಗ್ರಹಿಸಿರುವ ಮಾಹಿತಿಗಳು ಆಧಾರ ಸಹಿತವಾದವುಗಳು
| |
4
|
ಸಮೀಕ್ಷೆಯಲ್ಲಿ ದಾಖಲಿಸಿದ ಮಾಹಿತಿಯನ್ನು ಕ್ರಮಬದ್ಧವಾಗಿ ದಾಖಲಿಸುವ ವಿಧಾನವನ್ನು ತಿಳಿದುಕೊಂಡಿದ್ದಾನೆ/ಳೆ.
| |
5
|
ಕುಟುಂಬಗಳ ವಿಧಗಳ ಬಗ್ಗೆ ಅರಿವು ಹೊಂದಿದ್ದಾನೆ/ಳೆ
|
Posted by,
Naveen Kumar
Social Science Coordinator
No comments:
Post a Comment