Tuesday, 12 September 2017

ಆಧಾರಗಳು

ತರಗತಿ  : 5 ರಿಂದ 8
ವಿಷಯ   : ಆಧಾರಗಳು
ಉದ್ದೇಶ  : ಇತಿಹಾಸದ ರಚನೆಯಲ್ಲಿ ಆಧಾರಗಳ ಪಾತ್ರವನ್ನು ಅರಿಯುವುದು.

ಚಟುವಟಿಕೆ ಮಾಡುವ ವಿಧಾನ

1. ವಿದ್ಯಾರ್ಥಿಗಳಿಗೆ ಐತಿಹಾಸಿಕ ಅಂಶ ಎಂದರೇನು? ಅವುಗಳು ಯಾವುವು? ಎಂಬುದನ್ನು ವಿವರಿಸಿ.
2. ನಿಮ್ಮ ಬಳಿ ಇರುವ ಹಳೆಯ ವಸ್ತುವೊಂದನ್ನು ಪ್ರದರ್ಶಿಸಿ,ಅದರಲ್ಲಿ ಕಂಡುಬರುವ ಐತಿಹಾಸಿಕ ಅಂಶಗಳನ್ನು ಹೇಗೆ ಪತ್ತೆ ಮಾಡುವುದು ಎಂಬುದನ್ನು ವಿವರಿಸಿ.
ಉದಾ :- ನಾಣ್ಯದಲ್ಲಿ ಕಂಡು ಬರುವ ವರ್ಷ.
3. ವಿದ್ಯಾರ್ಥಿಗಳಿಗೆ ಅವರ ಮನೆಯಲ್ಲಿರುವ ಅತ್ಯಂತ ಹಳೆಯ ವಸ್ತುಗಳನ್ನು ಸಂಗ್ರಹಿಸಿ ತರುವಂತೆ ತಿಳಿಸಿ. ಅವು ಜನರು ನಿತ್ಯ ಬಳಸುವ ವಸ್ತುಗಳಾಗಿರ ಬಹುದು/ಅವುಗಳು ಹಿಂದಿನ ಚಟುವಟಿಕೆ ಅಥವಾ ಜನರನ್ನು ನೆನಪಿಸುವ ಭೌತಿಕ ವಸ್ತುಗಳಾಗಿರಬಹುದು.
ಉದಾ:- ಭಾವಚಿತ್ರಗಳು(ಪೋಟೋ),ಪತ್ರಿಕೆಗಳು/ನಿಯತಕಾಲಿಕೆಗಳು,ವರಧಿ ಪತ್ರಗಳು, ಅಂಚೆ ಕಾರ್ಡ್,ಹಳೆಯ ನಾಣ್ಯಗಳು,ವಿಗ್ರಹ,ವಿವಿಧ ಲೋಹದ(ತಾಮ್ರ,ಕಂಚು,ಕಬ್ಬಿಣ) ವಸ್ತುಗಳು, ಮರದ ಆಟಿಕೆಗಳು,  ಇತ್ಯಾದಿ
4. ನಂತರ ಅವುಗಳನ್ನು ಮೇಜಿನ ಮೇಲೆ ಅರಡಿ, ಆ ವಸ್ತುಗಳಲ್ಲಿ ಕಂಡುಬರುವ ಐತಿಹಾಸಿಕ ಅಂಶಗಳನ್ನು ಗುರುತಿಸಿ ಪಟ್ಟಿ ಮಾಡುವಂತೆ ಮಕ್ಕಳಿಗೆ ತಿಳಿಸಿ.
ಕ್ರ.ಸಂ
        ವಸ್ತು
ಐತಿಹಾಸಿಕ ಅಂಶ















5. ನಂತರ ಮಕ್ಕಳು ಪಟ್ಟಿ ಮಾಡಿರುವ ಐತಿಹಾಸಿಕ ಅಂಶಗಳನ್ನು ತರಗತಿಯ ಇತರ ವಿದ್ಯಾರ್ಥಿಗಳೊಂದಿಗೆ ಅಂಚಿಕೊಳ್ಳಲು ಅವಕಾಶ ಮಾಡಿಕೊಡಿ ಮತ್ತು ಅವರು ದಾಖಲಿಸಿರುವ ಐತಿಹಾಸಿಕ ಅಂಶಗಳು ಸರಿಯೋ? ತಪ್ಪೋ? ಎಂಬುದನ್ನು ಸಹ ಚರ್ಚೆಗೆ ತೆಗೆದುಕೊಳ್ಳಿ.
6. ನಂತರ ಇತಿಹಾಸ ರಚನೆಗೆ ಆಧಾರಗಳು ಮುಖ್ಯವೇ? ಆಧಾರಗಳಿಲ್ಲಿದೆ ಇತಿಹಾಸ ರಚನೆ ಸಾಧ್ಯವಿದೆಯೇ? ಎಂಬುದನ್ನು ಚರ್ಚಿಸಿ.ಇದರ ಮೂಲಕ ಅವರಿಗೆ ಇತಿಹಾಸ ರಚನೆಯಲ್ಲಿ ಆಧಾರ ಪಾತ್ರ ಎಷ್ಟು ಮುಖ್ಯ ಎಂಬುದರ ಅರಿವು ಮೂಡುತ್ತದೆ.

Posted by,
Naveen kumar
Social Science Coordinator

No comments:

Post a Comment