ನನ್ನ ವ್ಯಥೆ - ಬೋನ್ ಸಾಯಿ ಕಥೆ

ಎಲ್ಲರಿಗೂ ನಮಸ್ಕಾರ, ನನ್ನ ಹೆಸರು ಬೋನ್ ಸಾಯಿ ಆದರೆ ನಾನು ಮನುಷ್ಯನಲ್ಲ ನಾನೊಂದು ಚಿಕ್ಕಮರ ನಾನು ಏಕೆ ಚಿಕ್ಕಮರವಾಗಿದ್ದೇನೆ?ನಾನು ಏಕೆ ಬೆಳೆಯುತ್ತಿಲ್ಲ ?ನಾ ಇಲ್ಲಿಗೆ ಹೇಗೆ ಬಂದೆ? ಎಂಬ ಕಥೆ ಈಗಾಗಲೇ ನಿಮಗೆ ತಿಳಿದಿದೆ. ನನ್ನಿಂದ ಈ ಮನುಷ್ಯರು ತಮ್ಮ ಕಷ್ಟಗಳನ್ನು ಮರೆಯುತ್ತಾರೆ, ಅವರ ಆಸೆ ಆಕಾಂಕ್ಷೆ, ಸುಖ ದು:ಖ ಎಲ್ಲವನ್ನು ನನ್ನ ಬಳಿ ಹಂಚಿಕೊಳ್ಳುತ್ತಾರೆ ಆದರೆ ನನ್ನ ಸುಖ-ದು:ಖ ಯಾವತ್ತು ಕೇಳಿಲ್ಲ ಏಕೆ ನನಗೆ ನಿಮ್ಮ ಹಾಗೆ ಕಿವಿ, ಬಾಯಿ, ಕಣ್ಣು, ಮೂಗು ಮತ್ತು ಚರ್ಮ ಎಂಬ ಪಂಚೇಂದ್ರಿಯಗಳು ಇಲ್ಲ ಅಂತಾನ ಇವೆಲ್ಲ ಇದ್ದೋರಿಗೆ ಮಾತ್ರನ ಭಾವನೆಗಳು ಇರೋದು ನನಗೆ ಇದಾವುದು ಇಲ್ಲದಿದ್ದರೂ ನಿಮ್ಮಹಾಗೆ ಜೀವ ನನಗೂ ಇದೆ ನಿಮ್ಮ ಹಾಗೆ ಬದುಕುವ ಹಕ್ಕು ನನಗೂ ಇದೆ. ನಿಮಗೆ ದು:ಖ ಆದಾಗ ನಿಮ್ಮ ಕಣ್ಣೀರು ಹೊರೆಸೊಕೆ ನಾನೇ ಬೇಕು, ನಿಮಗೆ ಸಂತೊಷ ಆದಾಗ ನಿಮ್ಮ ಜೊತೆ ಡ್ಯಾನ್ಸ್ ಮಾಡೋಕು ನಾನೇ ಬೇಕು. ನಿಮ್ಮ ಕಾಲಿಗೆ ಮುಳ್ಳಲ್ಲ ಬರೀ ಕಲ್ಲು ಚುಚ್ಚಿದ್ರೇನೆ ನೋವು ಅಂತಿರ ಆದ್ರೆ ನನಗೆ ನನ್ ಕಾಲಿನ ತರ ಇರೊ ನನ್ನ ಬೇರುಗಳನ್ನ ಪ್ರತಿದಿನ ಕಟ್ ಮಾಡ್ತಿರಲ್ಲ ನಾನ್ ಏನ್ ಮಾಡ್ಲಿ, ನೀವು ನಿಮ್ಮ ಕೂದಲು ಕಟ್ ಮಾಡೋ ತರ ನನ್ನ ಚಿಗುರು ಎಲೆಗಳನ್ನು ಕಟ್ ಮಾಡ್ತಿರಲ್ಲ ಆಗ ಹಾಗೋ ನೋವು ನಿಮಗೆ ನಾನ್ ಹೇಗೆ ಹೇಳಲಿ. ಆದರೂ ನೀವು ನನ್ ಮುಂದೆ ಬಂದು ನಿಮ್ಮ ನೋವುಗಳನ್ನು ಮರಿತೀರಲ್ಲ ಅಷ್ಟೇ ಸಾಕು. ಬೇರೆಯವರಿಗೆ ನೋವು ಕೊಡದೆ ಅವರ ನೋವು ಮರೆಸಿದೆ ಎಂಬ ಖುಷಿ ಮುಂದೆ ನನ್ನ ಎಲ್ಲಾ ನೋವುಗಳನ್ನ ಮರಿತೀನಿ. ನಾನು ನಿಮ್ಮ ನೋವುಗಳಿಗೆ ಸ್ಪಂದಿಸುತ್ತೇನೆ, ನಾನೇನು ನಿಮ್ಮನ್ನ ದ್ವೇಷಿಸುತ್ತಾ ಇಲ್ಲ, ಏಕೆಂದರೆ ನೀವು ನನ್ನನ್ನು ನಿಮ್ಮ ಮಗು ತರನೆ ಸಾಕುತ್ತೀರ, ನೋಡಿಕೊಳ್ಳತ್ತೀರ. ಅದಕ್ಕೆ ನನ್ನ ಅಭಿನಂದನೆ ಯಾವಾಗಲೂ ನಿಮ್ಮ ಋಣ ಮರೆಯಲ್ಲ. ಆದರೆ ನಿಮ್ಮ ಮಗು ದೊಡ್ಡದಾಗಿ ಬೆಳೆಯಬೇಕು, ಅವರ ಆಸೆಗಳನ್ನು ಈಡೇರಿಸಬೇಕು ಎಂಬ ಆಸೆ ಇರುತ್ತಾಲ್ವ ಹಾಗೆ ನನಗೂ ಬೇರೆ ಮರಗಳ ರೀತಿ ಬೆಳೆಯಬೇಕು ಬೇರೆಯವರಿಗೆ ಆಶ್ರಯ ನೆರಳು ನೀಡಬೇಕು ಅನ್ನೋ ಸಣ್ಣ ಕೋರಿಕೆ ಅಷ್ಟೆ. ನನ್ನ ಕಥೆ ಇನ್ನೂ ಇದೆ ಆದರೆ ಹೇಳಲು ಆಗುತ್ತಿಲ್ಲ ಅಷ್ಟೆ. ಇಲ್ಲಿಯವರೆಗೂ ನನ್ನ ಭಾವನೆಗಳಿಗೆ ಸ್ಪಂದಿಸಿದಕ್ಕೆ ಧನ್ಯವಾದಗಳು ಇಂತಿ ನಿಮ್ಮ ನೋವಿನ ಜೊತೆಗಾರ ಬೋನ್ ಸಾಯಿ.
Posted by
PRADEEP,
BBMP School Jogupalya
No comments:
Post a Comment