Sunday, 1 October 2017

ಪದಗೋಡೆ

ತರಗತಿ: 3ರಿಂದ 7
ವಿಷಯ : ಪದಗೋಡೆ
ಉದ್ದೇಶ: ಗುಣಿತಾಕ್ಷರವನ್ನು ಓದುವ, ಬರೆಯುವ ಸಾಮರ್ಥ್ಯವನ್ನು ಬೆಳೆಸುವುದು
ಬೇಕಾಗುವ ಸಾಮಗ್ರಿಗಳು: ಕಲರ್ ಮಾರ್ಕರ್ಸ್, ಕ್ರಯಾನ್ಸ್, ಗಮ್ ಟೇಪ್, ಕತ್ತರಿ, ಬಿಳಿ ಹಾಳೆ

ಸೂಚನೆಗಳು: 

1. ಪದಗೋಡೆ ಎಂದರೇನು ಎಂಬುದನ್ನು ಮಕ್ಕಳಿಗೆ ಅರ್ಥ ಮಾಡಿಸುವುದು
2. ಮೊದಲು (ಅ) ಯಿಂದ (ಅಃ) ವರೆಗೆ ಅಕ್ಷರಗಳು ಜೊತೆಗಿನ ಗುಣಿತಾಕ್ಷರ ಚಿಹ್ನೆಗಳನ್ನು ಕಾರ್ಡ್ ಗಳಲ್ಲಿ ಬರೆಯುವುದು.
3. ಅಕ್ಷರಗಳಿಗೆ ಒಂದು ಬಣ್ಣ (ಉದಾ: ಕೆಂಪು) ಹಾಗೂ ಗುಣಿತಾಕ್ಷರ ಚಿಹ್ನೆಗೆ ಒಂದು ಬಣ್ಣ ( ಉದಾ: ಹಸಿರು) ಬಳಸಿ ಬರೆಯುವುದು.
4. ಈ ಸ್ವರಾಕ್ಷರಗಳನ್ನು ಒಂದರ ನಡುವೆ ಒಂದು ಅಂತರ ಇರುವಂತೆ ತರಗತಿಯ ಒಂದು ಖಾಲಿ ಗೋಡೆಯ ಮೇಲೆ ಅಂಟಿಸುವುದು.
5. ಬಿಳಿ ಖಾಲಿ ಹಾಳೆಯನ್ನು ಮಕ್ಕಳಿಗೆ ಕಾಣುವಷ್ಟು ದಪ್ಪ ಅಕ್ಷರ ಬರೆಯಲು ಸಾಧ್ಯವಾಗುವಂತೆ ಕತ್ತರಿಸಿಡುವುದು.
6. ಆ ಹಾಳೆಯಲ್ಲಿ ಮಕ್ಕಳು ಯಾವ ಪದದಲ್ಲಿ ಯಾವ ಗುಣಿತಾಕ್ಷರ ಓದಲು ಕಷ್ಟ ಪಡುತ್ತಿರುತ್ತಾರೋ ಆ ಪದವನ್ನು ಬರೆದು ಗುಣಿತಾಕ್ಷರವನ್ನು ಗುರುತು ಮಾಡಿ, ಆ ಗುಣಿತಾಕ್ಷರದ ಕೆಳಗೆ ಅಂಟಿಸುವರು.
7. ನಂತರ  ಆ ಪದವನ್ನು ಜೋರಾಗಿ ಒಮ್ಮೆ ಓದಿ ಎಲ್ಲರಿಗೂ ಹೇಳುವರು




ಸ್ವಾವಲೋಕನ:  
ಪದಗೋಡೆಯ ಬಳಕೆಯಿಂದಾಗಿ ಮಕ್ಕಳು ಸುಲಭವಾಗಿ ಗುಣಿತಾಕ್ಷರವನ್ನು ಗುರುತಿಸಿ, ಓದಲು ಸಹಾಯವಾಗುತ್ತಿದೆ.
ಮಕ್ಕಳು ಕಥೆ ಪುಸ್ತಕ ಅಥವಾ ಬೇರೆ ಏನಾದರೂ ಓದುವಾಗ ತೊಂದರೆ ಉಂಟಾದ ಪದವನ್ನು ಹಾಗೂ ಅದರಲ್ಲಿರುವ ಗುಣಿತಾಕ್ಷರವನ್ನು ಗುರುತಿಸಿ ಯಾವ ಸ್ವರದಡಿ ಬರುವುದು ಅದನ್ನು ಹೇಗೆ ಉಚ್ಚರಿಸುವುದು ಎಂದು ಪದಗೋಡೆಯಲ್ಲಿ ಅನ್ವಯಿಸಿಕೊಂಡು ಓದುತ್ತಾರೆ.
ಹೀಗೆ ಬರೆಯುವಾಗ ಏನಾದರೂ ಗೊಂದಲ ಉಂಟಾದಾಗ ಪದಗೋಡೆ ನೋಡಿ ಮತ್ತು ನಮ್ಮ ಉಚ್ಚಾರದೊಂದಿಗೆ ಹೊಂದಿಸಿ ಬರೆಯುತ್ತಾರೆ. ಇದರಿಂದ ಮಕ್ಕಳಲ್ಲಿ ಕಲಿಕಾ ಆಸಕ್ತಿ ಹೆಚ್ಚಿದೆ. ಗೊಂದಲಗಳು ಕ್ರಮೇಣ ನಶಿಸುತ್ತವೆಂದು ಅನಿಸತ್ತದೆ. ಮಕ್ಕಳಲ್ಲಿ ಉತ್ತಮ ಕನ್ನಡ ಕಲಿಕಾ ಗುಣಮಟ್ಟ ಹೆಚ್ಚುತ್ತದೆ.


Posted by
Divyashree
BBMP School Tasker Town

No comments:

Post a Comment