ಹಂತ
: 3
ತರಗತಿ : 4 ರಿಂದ
7
ವಿಷಯ : ಪರಿಸರ ಅಧ್ಯಯನ.
ಚಟುವಟಿಕೆ : ಹಳ್ಳಿ ಮಾದರಿ ಮನೆಗಳನ್ನು
ತಯಾರಿಸುವುದು.
ಉದ್ದೇಶ : ವಿವಿಧ ರೀತಿಯ ಮನೆಗಳನ್ನು
ತಯಾರಿಸುವುದು.
ಬೇಕಾಗಿರುವ ಸಾಮಾಗ್ರಿಗಳು : ರಟ್ಟು, ಗೊಂದು, ಕತ್ತರಿ,
ಬಣ್ಣ.
ಚಟುವಟಿಕೆ ಮಾಡುವ ವಿಧಾನ :
- ಮೂರರಿಂದ ನಾಲ್ಕು ಮಕ್ಕಳನ್ನು ಒಳಗೊಂಡಂತೆ ಗುಂಪುಗಳನ್ನು ರಚಿಸಿ.
- ಮನೆಗಳ ಮಾದರಿಗಳನ್ನು ತಯಾರಿಸಲು ಅಗತ್ಯವಿರುವ ಸಾಮಗ್ರಿಗಳನ್ನು ಮಕ್ಕಳಿಗೆ ನೀಡಿ.
- ಪ್ರತಿ ಗುಂಪಿಗೂ ತಾವು ನೋಡಿರುವ ಮನೆಗಳ ಮಾದರಿಗಳನ್ನು ತಯಾರಿಸುವಂತೆ ತಿಳಿಸಿ.
- ಮಕ್ಕಳು ತಯಾರಿಸಿದ ಮಾದರಿ ಮನೆಗಳಿಗೆ ಬಣ್ಣ ಹಚ್ಚುವಂತೆ ತಿಳಿಸಿ.
- ಮಕ್ಕಳು ತಯಾರಿಸಿದ ಮನೆಗಳ ಮಾದರಿಗಳ ವಿಶೇಷತೆಯನ್ನು ಅಂಚಿಕೊಳ್ಳಲು ಅಥವಾ ಬರೆಯಲು ಅವಕಾಶ ಕಲ್ಪಿಸಿ ಕೊಡಿ.
ಸೂಚನೆ :
ಮಕ್ಕಳು ಮಾದರಿಗಳನ್ನು ತಯಾರಿಸುವಾಗ ಹರಿತವಾದ ವಸ್ತುಗಳನ್ನು ಬಳಸುವಾಗ
ಎಚ್ಚರಿಕೆ ವಹಿಸಿ.
ಸ್ವಾವಲೋಕನ :
ನಾನು ತರಗತಿಯಲ್ಲಿ ಈ ಚಟುವಟಿಕೆಯನ್ನು ಕೈಗೊಂಡಾಗ
ಮಕ್ಕಳು ಬಹಳ ಸಂತೋಷದಿಂದ ಮಾಡಿದರು.
ಈ ಚಟುವಟಿಕೆಯನ್ನು 4 ರಿಂದ
7 ನೇ ತರಗತಿಯ ಎಲ್ಲಾ ಮಕ್ಕಳು
ಪ್ರತಿ ತರಗತಿಯಲ್ಲೂ ಮಾಡಿದರು. ಈ ಚಟುವಟಿಕೆ ಮಾಡುವ
ಮೊದಲು ನಾನು ಬೇಕಾಗಿರುವ ಸಾಮಗ್ರಿಗಳನ್ನು
ಮಕ್ಕಳಿಂದಲೇ ತರಿಸಿದ್ದೆ. ಅದನ್ನು ಕತ್ತರಿಸಲು ಅಂಟಿಸಲು
ಬೇಕಾದ ಸಾಮಗ್ರಿಗಳನ್ನು ಮಾತ್ರ ನಾನು ನೀಡಿದೆ.
ಮಕ್ಕಳು ತಾವು ನೋಡಿರುವ ಮನೆಗಳನ್ನು ಮಾಡ ತೊಡಗಿದರು. ವಿಶೇಷತೆ
ಎಂದರೆ ಮಕ್ಕಳು ಹಳ್ಳಿಗಳಲ್ಲಿರುವ ಹೆಂಚಿನ
ಮನೆ, ಗುಡಿಸಲು ಮನೆ, ಸೀಟಿನ
ಮನೆ, ಹೀಗೆ ವಿವಿಧ ರೀತಿಯ
ಮನೆಗಳನ್ನು ಮಾಡಿ ಅವುಗಳಿಗೆ ಬಣ್ಣ
ಹಚ್ಚಿದರು. ನಂತರ ತಾವು ಮಾಡಿರುವ
ಮನೆಗಳ ವಿಶೇಷತೆಯನ್ನು ಬರೆದು ತರಗತಿಯಲ್ಲಿ ಹಂಚಿಕೊಂಡರು.
ಹೀಗೆ ಹಂಚಿಕೊಳ್ಳುವಾಗ 7 ನೇ ತರಗತಿಯ ರೂಪ
ಮತ್ತು ದೀಪ ಎಂಬ ಮಕ್ಕಳು
ತಮ್ಮ ಊರಿನಲ್ಲಿ ಜಂಗ್ಲಿ ಮನೆಯ ಬಗ್ಗೆ ಹೇಳಿದರು.
Posted by
PRADEEP
BBMP School Joguplaya
No comments:
Post a Comment